Sunday 17 October 2010

ನಾ ರಾಧೆ ಅವ ಶ್ಯಾಮ

ಶೀತಲದ ಹಿಮಮಣಿಯ ಮುಡಿದಿರುವ ನವಸುಮವೆ
ಕೇಳೆನ್ನ ಕನಸಿನಲಿ ಕಳೆದಿರುಳ ಸವಿಸುಖವಾ..

ಯಮುನೆ ಸಿರಿತೊರೆಯ ಬಳಿ ಚಂದ್ರಮನ ಚೆಂಬೆಳಕು
ಮಾರುತನ ಮೃದುಸ್ಪರ್ಶ ತರುಲತೆಯ ಆಲಾಪ..
ನಾ ರಾಧೆ ಅವ ಶ್ಯಾಮ ಉಯಾಲೆ ಹೂಮಂಚ
ಅನುರಾಗ ಕೊಳಲಸುಧೆ ಪರಿಮಳಿಸಿ ನರುಗಂಪು..

ನಸುನಗೆಯ ದೊರೆ ಶ್ಯಾಮ ಕುಡಿಗಣ್ಣ ಸಂಚಲ್ಲಿ
ಬಳಿಸಾರಿ ಬರಸೆಳೆಯೆ ನಾ ಬಳ್ಳಿ ಅವನೆದೆಗೆ..
ರಂಗಾದ ಮೊಗವೆನ್ನ ಬೊಗಸೆಯಲಿ ಮೊಗೆದುಂಬಿ
ಸುರಲೋಕ ಕದತೆರೆದ ಅಧರಗಳ ಮಧುಪಾನಾ..

ಕಂಕಣದ ರಿಂಗಣವು ಕಚಗುಳಿಯ ಇಟ್ಟಂತೆ
ನೂಪುರದ ಅನುರಣನೆ ಮತ್ತೇರಿ ಮೌನದಲಿ..
ಸುಮಬಾಣ ಮೇಳೈಸಿ ಮೆಲ್ಲುಸಿರ ಸಲ್ಲಾಪ
ಒಲವೆಲ್ಲ ರೋಮಾಂಚ ಉಲ್ಲಾಸ ರಸಮಿಲನಾ..

4 comments:

  1. ಮೃದು ಶಬ್ದಶಯ್ಯೆಯಲ್ಲಿ ಮತ್ತೊಮ್ಮೆ ಮರುಕಳಿಸಿದ ಮಧುರ ಭಾವ...

    ReplyDelete
  2. ಆಹಾ!

    ಸುಂದರ.. ಕವಯಿತ್ರಿ, ಗಾಯಕಿ, ಚಿತ್ರಕಾರ್ತಿ.. ಅಬ್ಬಬ್ಬಾ...

    ReplyDelete
  3. ಧನ್ಯವಾದಗಳು, ನಿಮ್ಮ ಅನಿಸಿಕೆಗಳಿಗೆ.
    ಅಬ್ಬಾ...ಅನ್ನುವಷ್ಟೇನೂ ಇಲ್ಲಪ್ಪಾ...
    "jack of all................." ಹಹ್ಹಾ..

    ReplyDelete
  4. ರಾಮಚಂದ್ರ ಪದ್ಯಾಣ, ರಾಮ ಅಜ್ಜಕಾನ, venkatakrishna, kumaara subrahmanya, jagadeesha sharma, venkateshwara ಭಟ್, mattu ಸೀತಾ ಭಟ್ ಅವರಿಗೆ tumba ಧನ್ಯವಾದಗಳು.

    ReplyDelete