Tuesday 7 December 2010

ಬೇಕು - ಸೋಲಬೇಕು.

ಹೋದಾಗ ಬಂದಾಗ
ನಿಂತಾಗ ಕೂತಾಗ
ನಾನು ನಿನಗೆಲ್ಲವನು ಹೇಳಬೇಕು..

ಇದ್ದಾಗ ಇರದಾಗ
ನಕ್ಕಾಗ ಅತ್ತಾಗ
ನೀನು ನನ್ನೆಲ್ಲವನು ಕೇಳಬೇಕು..

ನಿದ್ದೆಯಲೋ ಎಚ್ಚರದಿ
ಕನಸಿನಲೋ ಕನವರಿಸಿ
ನಾವೀರ್ವರೂ ತೆರೆದ ಬಯಲಾಗಬೇಕು..

ನಾ ನಿನ್ನ ಎದೆ ದನಿಗೆ
ನೀ ನನ್ನ ಎದೆಯೊಳಗೆ
ಮೈ ಉದ್ದಕೂ ತೆರೆದ ಕಿವಿಯಾಗಬೇಕು..

ಅನಿಸಿದೆಲ್ಲವ ಹೇಳಿ
ಹೇಳಿದೆಲ್ಲವ ಅಳೆದು
ಅಳುವಳಿಸಿ ರಮಿರಮಿಸಿ ನಲಿಯಬೇಕು..

ನಿನಗೆಲ್ಲ ನಾ ಸೋತು
ನನಗೆಲ್ಲ ನೀ ಸೋತು
ಸೋಲಿನಿಂದಲೆ ಬದುಕು ಗೆಲ್ಲಬೇಕು..

---0---

4 comments:

  1. ಒಳ್ಳೆಯ ಕವಿತೆ.. ನಿಜಕ್ಕೂ.. ನೀವು ಗಾಯಕಿ ಆಗದಿರುತ್ತಿದ್ದರೆ ಬಹುಶಃ ಕವಯಿತ್ರಿ ಆಗಿರುತ್ತಿದ್ದಿರಿ.. ಹಾ0, ನೆನಪು ಸುಂದರವಾಗಿ ಸಾಗುತ್ತಿದೆ.. picturesque description ಹಿಡಿಸಿತು

    ReplyDelete
  2. ಸೋಲಿನಿಂದಲೆ ಬದುಕು ಗೆಲ್ಲಬೇಕು..,
    ಜೀವನ ಪೂರ್ತಿ ನಗುವು ಅರಳಬೇಕು.
    ಸು೦ದರ ಕವಿತೆಗೆ ಅಭಿನ೦ದನೆ ಪ್ರೇಮಕ್ಕ.

    ReplyDelete
  3. "ಸೋಲಿನಿಂದಲೆ ಬದುಕು ಗೆಲ್ಲಬೇಕು" ಸುಂದರ ಸೊಲ್ಲು, ಸುಮಧುರ ಗೀತೆ.

    ReplyDelete
  4. @ ಜಯರಾಮ್ - ಧನ್ಯವಾದಗಳು.. ಚಿತ್ರಾತ್ಮಕ ನಿರೂಪಣೆ ಎಂದು 'ನೆನಪನ್ನು' ಮೆಚ್ಚಿದ್ದಕ್ಕೆ !

    @ ಸುಬ್ರಹ್ಮಣ್ಯ - ತುಂಬಾ ಸಂತೋಷ .. ನಿಮ್ಮ ಅನಿಸಿಕೆಗಳ ತಿಳಿಸಿದ್ದಕ್ಕೆ!

    @ ವಿದ್ವಾನಣ್ಣ - :)
    ಸುಮ್ಮನೆ ಸಾಮಾನ್ಯಳು ನನಗೆಂದೆ 'ಹಾಡಿಕೊಂಡ' ಸಣ್ಣ ಸಾಲುಗಳ ಗೀಚಿದ್ದು ಇಲ್ಲಿ,
    ಮೆಚ್ಚಿ ಹಿರಿತನ ಮೆರೆದಿರಿ, ತುಂಬ ಧನ್ಯವಾದಗಳು..

    ReplyDelete